62f2a0144337f

62f2a0144337f

1 month
0 Views
Want to watch this again later?
Sign in to add this video to a playlist. Login
0 0
Category:
Description:
#Public_Star_News

ಹಾಸನದಲ್ಲಿ ಮೃತದೇಹಗಳ ಅಂತ್ಯಕ್ರಿಯೆಗೆ ಪರದಾಟ: ಜನರ ಗೋಳು ಕೇಳುವವರು ಯಾರೂ ಇಲ್ಲವೇ...?
https://youtu.be/k3QPIfL04Gc

ಹಾಸನ ಜಿಲ್ಲೆಯಲ್ಲಿ ದಿನಂಪ್ರತಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದೇ ರೀತಿಯಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಗಣನೀಯ ವಾಗಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಜನರು ಪರದಾಡುತಿರುವ ಮನ ಕಲಕುವ ಘಟನೆಗೆ ಬಿಟ್ಟಗೌಡನಹಳ್ಳಿ ಯಲ್ಲಿರುವ ಸ್ಮಶಾನ ಸಾಕ್ಷಿಯಾಗಿದೆ.

ನಗರದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಮೃತದೇಹಗಳ ಅಂತ್ಯಕ್ರಿಯೆ ತಲೆನೋವಾಗಿ ಪರಿಣಮಿಸಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಾವಿನ ಸಂಖ್ಯೆ ಹೆಚ್ಚಾದ ದಿನಗಳಲ್ಲಿ ಸಾಮಾನ್ಯವಾಗಿ ಸಾವಿಗೀಡಾದವರ ಅಂತ್ಯಕ್ರಿಯೆ ನಡೆಸಲು ಕಷ್ಟವಾಗಿದೆ.

ಬಿಟ್ಟಾಗೌಡನಹಳ್ಳಿ ಯಲ್ಲಿರುವ ಚಿತಾಗಾರದಲ್ಲಿ ಒಮ್ಮೆ ಐದು ಮೃತದೇಹಗಳನ್ನು ದಹನ ಮಾಡಲು ಮಾತ್ರ ಅವಕಾಶವಿದೆ. ಆದರೆ ಇಂದು ನಗರದಲ್ಲಿ ಐವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, 6ಜನ ಸಾಮಾನ್ಯವಾಗಿ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡಬೇಕು. ಸಾಮಾನ್ಯವಾಗಿ ಮೃತಪಟ್ಟ ದೇಹಗಳನ್ನು ಸಹ ಹೆಚ್ಚು ಸಮಯದ ತನಕ ಇಡುವಂತಿಲ್ಲ.

ಸದ್ಯ ನಗರದಲ್ಲಿ ಒಟ್ಟಾಗಿ 11 ಜನರು ಮೃತಪಟ್ಟಿದ್ದು, ಕೋವಿಡ್ ಸೋಂಕಿನಿಂದ ಮೃತಪಟ್ಟ ಐವರ ಅಂತ್ಯಕ್ರಿಯೆ ನಡೆಸಲು ಚಿತಾಗಾರದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಇನ್ನುಳಿದ ಮೃತದೇಹಗಳ ಅಂತ್ಯಕ್ರಿಯೆಗೆ ಸಂಬಂಧಿಕರು ಪರದಾಡುವ ಪರಿಸ್ಥಿತಿ ಎದುರಾಗಿತ್ತು.

11ಜನರ ಅಂತ್ಯಕ್ರಿಯೆ ನಡೆಸಲು ಕಷ್ಟವಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವ ಚಿತಾಗಾರದ ಸಿಬ್ಬಂದಿಗಳ ಮುಂದೆ, ಇವತ್ತೇ ಮೃತದೇಹಗಳ ಅಂತ್ಯಕ್ರಿಯೆಯನ್ನು ಮಾಡಿಕೊಡಿ ಎಂದು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಸದ್ಯ ಮೃತದೇಹಗಳ ಅಂತ್ಯಕ್ರಿಯೆಗೂ ಜನರು ಪರಿತಪಿಸುವ ಪರಿಸ್ಥಿತಿ ಹಾಸನ ನಗರಕ್ಕೆ ಒದಗಿಬಂದಿದೆ.

ಹಾಗಾಗಿ ಈ ಸಂಬಂಧ ಜಿಲ್ಲಾಡಳಿತ ಮೃತದೇಹಗಳ ಅಂತ್ಯಕ್ರಿಯೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಜನರಿಗಾಗುತ್ತಿರುವ ತೊಂದರೆಗಳಿಗೆ ಪರಿಹಾರ ಒದಗಿಸಬೇಕಾಗಿದೆ. ತಮ್ಮವರನ್ನ ಕಳೆದುಕೊಂಡಿರುವ ದುಃಖದ ನಡುವೆ ಅಂತ್ಯಕ್ರಿಯೆಗೂ ಜನರು ಅಲೆದಾಡುವ ಪರಿಸ್ಥಿತಿ ಎದುರಾಗಬಾರದು.